ಅಂತರ್ ತರಗತಿ ಸ್ಪರ್ಧೆ

 

ವಿದ್ಯಾಗಿರಿ: “ವಿದ್ಯಾರ್ಥಿಗಳು ಎಲ್ಲಾ ರಂಗದಲ್ಲೂ ಬೇರೆಯವರಿಗಿಂತ ಭಿನ್ನವಾಗಿ ತಮ್ಮನ್ನು ತಾವು ಗುರುತಿಸಿಕೊಳ್ಳುವಂತಾಗಬೇಕು” ಎಂದು ಆಳ್ವಾಸ್ ಕಾಲೇಜಿನ ಪ್ರಾಶುಂಪಾಲ ಡಾ. ಕುರಿಯನ್ ನುಡಿದರು.
ಆಳ್ವಾಸ್ ಕಾಲೇಜಿನ ಎಂ.ಕಾಮ್.ಎಮ್.ಎಚ್.ಆರ್.ಡಿ. ವಿಭಾಗವು ಆಯೋಜಿಸಿದ್ದ ಇಂಟರ್ ಕ್ಲಾಸ್ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಬಹುತೇಕ ವಿದ್ಯಾರ್ಥಿಗಳು ಕಲಿಕೆಯಲ್ಲಿ ನಿರ್ಧಿಷ್ಟ ಗುರಿ ಹೊಂದದೇ ಇರುವುದು ವಿಪರ್ಯಾಸವೇ ಸರಿ. ವಿದ್ಯಾರ್ಥಿಗಳು ತಮ್ಮ ಅಮೂಲ್ಯವಾದ ಸಮಯವನ್ನು ಕಾಲಹರಣ ಮಾಡದೆ, ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿ ಇತರರಿಗೆ ಮಾದರಿಯಾಗಿ ನಿಲ್ಲಬೇಕು. ಪದವಿ ವಿದ್ಯಾರ್ಥಿಗಳಾದ ನೀವು ಕೇವಲ ಪದವಿ ಪಡೆಯುವುದು ಮಾತ್ರ ಉದ್ದೇಶವಲ್ಲ, ಜೊತೆಗೆ ಸಮಾಜದಲ್ಲಿ ನಾಗರೀಕರಾಗಿ ಯಾವ ರೀತಿ ಪ್ರತಿಕ್ರಿಯಿಸುತ್ತೀರಿ ಅನ್ನೋದು ಮುಖ್ಯವಾಗಿರುತ್ತದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥೆ ಶಾಝಿಯಾ ಸೈಯದ್ ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು. ಒಟ್ಟು 40 ವಿದ್ಯಾರ್ಥಿಗಳು ವಿವಿಧ ವಿಭಾಗದಿಂದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು


About Alva's

Alva’s Education Foundation is a multifaceted organization founded by Dr. M. Mohan Alva and it is considered as the crown of Moodbidri.