ಆಳ್ವಾಸ ಕಾಲೇಜಿನಲ್ಲಿ ‘’ಜೀವನ ಶಿಕ್ಷಣದ ಪ್ರಸ್ತುತತೆ ‘’ ಸೆಮಿನಾರ್

dsc_9887ಮೂಡಬಿದಿರೆ:ಇಂದಿನ ಸ್ಪರ್ಧಾತ್ಮಕಯುಗದಲ್ಲಿ ಅನೇಕ ವಿದ್ಯಾರ್ಥಿಗಳು ನಿರ್ದಿಷ್ಟ ಗುರಿ, ಉದ್ದೇಶ ವಿಲ್ಲದೇ ಭವಿಷ್ಯದ ಕಡೆಗೆ ಚಿಂತಿಸುತಿದ್ದಾರೆ. ಆದರೆ ವಿದ್ಯಾರ್ಥಿಗಳು ಉತ್ತಮ ಜೀವನ ಕೌಶಲ್ಯಗಳನ್ನು ಆರಂಭದಲ್ಲಿ ಬೆಳೆಸಿಕೊಂಡಾಗ ತಮ್ಮ ಉಜ್ವಲ ಭವಿಷ್ಯದ ನಿರ್ಮಾತೃರಾಗಲು ಸಾದ್ಯ ಎಂದು ಬ್ರಹ್ಮಾವರ ಕ್ರಾಸಲ್ಯಾಂಡ್ ಕಾಲೇಜಿನ ಸಹ ಪ್ರಾದ್ಯಾಪಕ ಡಾ ಜಿ ರೊಬರ್ಟ ಕ್ಲೈವ್ ನುಡಿದರು.
ಅವರು ಮಂಗಳವಾರ, ಆಳ್ವಾಸ್ ಕಾಲೇಜಿನ ಮ್ಯಾನೇಜ್ಮೆಂಟ್ ಆ್ಯಂಡ್ ಎಚ್ ಆರ್ ಡಿ ವಿಭಾಗ ಆಯೋಜಿಸಿದ್ದ ‘’ ಲೈಫ್ ಸ್ಕಿಲ್ಸ್ ಎಜುಕೇಶನ್ – ಇಟ್ಸ್ ರೆಲೆವೆನ್ಸ್ ಇನ್ ದ ಪ್ರೆಸೆಂಟ್ ಸಿನಾರಿಯೋ’’ ವಿಶ್ವವಿದ್ಯಾಲಯ ಮಟ್ಟದ ಎಚ್ ಆರ್ ಸೆಮಿನಾರ್‍ನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಆರಂಭದಿಂದಲೇ ವಿದ್ಯಾರ್ಥಿಗಳು ನಿರ್ದಿಷ್ಟ ಗುರಿ ಹಾಗೂ ಉದ್ದೇಶದಿಂದ ಕಾರ್ಯೋನ್ಮುಖರದಾಗ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ತಿಳಿಸಿದರು. ಸೃಜನಾಶೀಲತೆ, ಸೂಕ್ಷ್ಮ ಸಂವೇದನೆ ಹಾಗೂ ಕಾರ್ಯತತ್ಪರತೆ ಪ್ರಸ್ತುತ ಜಗತ್ತಿನ ಬೇಡಿಕೆಗಳಲ್ಲಿ ಮೇಲ್ಪಂಕ್ತಿಯಲ್ಲಿ ನಿಲ್ಲುವ ಕೌಶಲಗಳು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿ ಮ್ಯಾನೇಜಿಂಗ ಟ್ರಸ್ಟಿ ವಿವೇಕ್ ಆಳ್ವ, ಪ್ರಾಚಾರ್ಯ ಡಾ ಕುರಿಯನ್, ವಿಭಾಗದ ಮುಖ್ಯಸ್ಥೆ ಸುರೇಖಾ ರಾವ್ ಉಪಸ್ಥಿತರಿದ್ದರು.


About Alva's

Alva’s Education Foundation is a multifaceted organization founded by Dr. M. Mohan Alva and it is considered as the crown of Moodbidri.