ಮೂಡುಬಿದಿರೆ: ಪುಣೆಯಲ್ಲಿ ನಡೆದ ರಾಷ್ಟ್ರ ಮಟ್ಟದ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಆಳ್ವಾಸ್‍ನ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ 6 ಚಿನ್ನ, 8 ಬೆಳ್ಳಿ, 3 ಕಂಚಿನ ಪದಕಗಳೊಂದಿಗೆ ಒಟ್ಟು 17 ಪದಕಗಳನ್ನು ಬಾಚಿಕೊಂಡಿದ್ದಾರೆ.
ಬಾಲಕಿಯರ ಅಥ್ಲೆಟಿಕ್ಸ್ ವಿಭಾಗದಲ್ಲಿ ಹೈಜಂಪ್‍ನಲ್ಲಿ ಸುಪ್ರಿಯ ಚಿನ್ನ, ಅಭಿನಯ ಶೆಟ್ಟಿ ಬೆಳ್ಳಿ, ಶಾಟ್‍ಫುಟ್‍ನಲ್ಲಿ ಅನಾಮಿಕದಾಸ್ ಚಿನ್ನ, ಶುಭ ವಿ.ಗೆ 400, 200 ಮೀಟರ್‍ನಲ್ಲಿ ಚಿನ್ನ ಮತ್ತು ಬೆಳ್ಳಿ ಹಾಗೆಯೇ ವೈಟ್ ಲಿಫ್ಟಿಂಗ್‍ನಲ್ಲಿ 71ಕೆಜಿ ವಿಭಾಗದಲ್ಲಿ ಲಾವಣ್ಯ ಬೆಳ್ಳಿ, 87ಕೆಜಿ ವಿಭಾಗದಲ್ಲಿ ಭವಿಷ್ಯ ಬೆಳ್ಳಿ, ಕುಸ್ತಿ ವಿಭಾಗದಲ್ಲಿ ಲಕ್ಷ್ಮೀ ರಡೇಕರ್ ಕಂಚಿನ ಪದಕ ಗೆದ್ದಿದ್ದಾರೆ.
ಬಾಲಕರ ಅಥ್ಲೆಟಿಕ್ಸ್ ವಿಭಾಗದಲ್ಲಿ ಮನು ಡಿ.ಪಿ ಜವಾಲಿನ್‍ನಲ್ಲಿ ಚಿನ್ನ, ಅಜೀತ್ ಕುಮಾರ್ 5000ಮೀ ಓಟದಲ್ಲಿ ಚಿನ್ನ, ದಿನೇಶ್ 10,000 ಮೀ. ಓಟದಲ್ಲಿ ಚಿನ್ನ, ಪ್ರಜ್ವಲ್ ಮಂದಣ್ಣ 100ಮೀ ಓಟದಲ್ಲಿ ಬೆಳ್ಳಿ,ರಿನ್ಸ್ ಜೋಸೆಫ್ 400ಮೀ ಓಟದಲ್ಲಿ ಬೆಳ್ಳಿ, ಸೌರವ್ ತನ್ವರ್ ಶಾಟ್‍ಫುಟ್‍ನಲ್ಲಿ ಬೆಳ್ಳಿ, ಸತ್ಯಂ ಚೌಧರಿ ಶಾಟ್‍ಫುಟ್‍ನಲ್ಲಿ ಬೆಳ್ಳಿ, ಯಮನೂರಪ್ಪ ಹ್ಯಾಮರ್ ತ್ರೋ ವಿಭಾಗದಲ್ಲಿ ಕಂಚು, ವೈಟ್‍ಲಿಫ್ಟಿಂಗ್‍ನ 109 ಕೆ.ಜಿ ವಿಭಾಗದಲ್ಲಿ ನಿಶಾಂತ್ ಇವರು ಕಂಚಿನ ಸಾಧನೆ ಮಾಡಿದ್ದಾರೆ.
ಕ್ರೀಡಾಪಟುಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.