ಆಳ್ವಾಸ್‍ಗೆ ಬಾಲ್ ಬ್ಯಾಡ್ಮಿಟನ್ ಪ್ರಶಸ್ತಿ

ತುಮಕೂರಿನಕ್ರಿಯೇಟಿವ್ಈಗಲ್ಸ್‍ಕ್ಲಬ್ ವತಿಯಿಂದ ಭಾನುವಾರ ಮುಕ್ತಾಯಗೊಂಡರಾಜ್ಯಮಟ್ಟದ ಹೊನಲು ಬೆಳಕಿನ ಆಹ್ವಾನಿತ ಬಾಲ್ ಬ್ಯಾಡ್ಮಿಟನ್‍ಟೂರ್ನಿಯಲ್ಲಿ ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಪುರುಷರತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ರಾಜ್ಯದಆಹ್ವಾನಿತ 15 ತಂಡಗಳು ಭಾಗವಹಿಸಿದ್ದ ಟೂರ್ನಿಯ ಫೈನಲ್ಸ್‍ನಲ್ಲಿ ಆಳ್ವಾಸ್ ತಂಡ ಬೆಂಗಳೂರಿನ ಕೆನರಾಬ್ಯಾಂಕ್‍ತಂಡವನ್ನು 35-26, 35-29 ಗಳ ನೇರ ಸೆಟ್‍ಗಳಿಂದ ಸೋಲಿಸಿ ಪ್ರಶಸ್ತಿ ಜಯಿಸಿತು. ಸೆಮಿಫೈನಲ್‍ನಲ್ಲಿಆಳ್ವಾಸ್ ತಂಡ ವಿಜಯನಗರ ಸ್ಪೋಟ್ಸ್‍ಕ್ಲಬ್‍ತಂಡವನ್ನು ಹಾಗೂ ಕೆನರಾಬ್ಯಾಂಕ್‍ತಂಡವು ಬನಶಂಕರಿ ಸ್ಪೋಟ್ಸ್‍ಕ್ಲಬ್‍ತಂಡವನ್ನು ಸೋಲಿಸಿ ಅಂತಿಮ ಪಂದ್ಯಕ್ಕೆಅರ್ಹತೆಯನ್ನು ಪಡೆದಿತ್ತು.