ರಾಜ್ಯ ಯೂತ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ ರಾಷ್ಟ್ರಮಟ್ಟಕ್ಕೆ ಆಳ್ವಾಸ್‍ನ ಎಂಟು ಮಂದಿ ಕ್ರೀಡಾಪಟುಗಳು ಆಯ್ಕೆ

ಮೂಡುಬಿದಿರೆ: ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆ ಹಾಗೂ ಮೈಸೂರು ಅಥ್ಲೆಟಿಕ್ಸ್ ಸಂಸ್ಥೆ ಆಶ್ರಯದಲ್ಲಿ ಮೈಸೂರಿನ ಚಾಮುಂಡಿ ವಿಹಾರ ಮೈದಾನದಲ್ಲಿ ನಡೆದ 18ರ ರಾಜ್ಯ ಯೂತ್ ಅಥ್ಲೆಟಿಕ್ಸ್‍ನಲ್ಲಿ ಆಳ್ವಾಸ್ ಸಂಸ್ಥೆ 16 ಪದಕಗಳನ್ನು ಪಡೆದಿದ್ದು, 8 ಮಂದಿ ಕ್ರೀಡಾಪಟುಗಳು ಫೆ.19ರಿಂದ 23ರವರೆಗೆ ರಾಯಪುರದಲ್ಲಿ ನಡೆಯುವ ರಾಷ್ಟ್ರೀಯ ಯೂತ್ ಅಥ್ಲೆಟಿಕ್ಸ್‍ಗೆ ಆಯ್ಕೆಯಾಗಿದ್ದಾರೆ.
ಬಾಲಕೀಯರ ವಿಭಾಗದಲ್ಲಿ ಆಳ್ವಾಸ್ ಸಂಸ್ಥೆಯ ಚೈತ್ರ 1500ಮೀ, 200ಮೀ ಓಟದಲ್ಲಿ ಪ್ರಥಮ, ದನುಷಾ ಶೆಟ್ಟಿ 5 ಕಿ.ಮೀ. ನಡಿಗೆಯಲ್ಲಿ ಪ್ರಥಮ, ಪಲ್ಲವಿ ಎತ್ತರ ಜಿಗಿತದಲ್ಲಿ ಪ್ರಥಮ, ಸಿಂಚನ ಎತ್ತರ ಜಿಗಿತದಲ್ಲಿ ದ್ವಿತೀಯ, ಬಿಲುಲಾ ಗುಂಡು ಎಸೆತದಲ್ಲಿ ತೃತೀಯ, ವಿಜಯಲಕ್ಷ್ಮೀ ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಬಾಲಕರ ವಿಭಾಗದಲ್ಲಿ ಮಹಾತೇಶ್ 400ಮೀ. ಪ್ರಥಮ, 200ಮೀ.ನಲ್ಲಿ ದ್ವಿತೀಯ, ಹ್ಯಾಮರ್ ಎಸೆತದಲ್ಲಿ ಮುತ್ತಪ್ಪ ಪ್ರಥಮ, ದೀಶತ್ 110 ಹರ್ಡಲ್ಸ್‍ನಲ್ಲಿ  ಪ್ರಥಮ, ಕಿರಣ್ ಪೋಲ್ ವಾಲ್ಟ್‍ನಲ್ಲಿ ಪ್ರಥಮ, ನಾಗೇಂದ್ರ ಅಣ್ಣಪ್ಪ ಗುಂಡು ಎಸೆತ, ಚಕ್ರ ಎಸೆತದಲ್ಲಿ ಪ್ರಥಮ,  ನಾಗರಾಜ್ 10 ಕಿ.ಮೀ ನಡಿಗೆಯಲ್ಲಿ ಪ್ರಥಮ ಸತೀಶ್ 3000 ಮೀ. ದ್ವಿತೀಯ, ರೋಹಿತ್ ತ್ರಿವಿಧ ಜಿಗಿತದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.