‘ಸೂಕ್ಷ್ಮಜೀವವಿಜ್ಞಾನವು ವಿಜ್ಞಾನ ವಿದ್ಯಾರ್ಥಿಗಳಿಗೂ ನವೀನ’

ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಸೂಕ್ಷ್ಮಜೀವವಿಜ್ಞಾನ ವಿಭಾಗದಲ್ಲಿ ಮೈಕ್ರೋಸ್ಪಾರ್ಕ್

ವಿದ್ಯಾಗಿರಿ(ಮೂಡುಬಿದಿರೆ): ‘ವೈದ್ಯರು ಮತ್ತು ಎಂಜಿನಿಯರ್‌ಗಳಿಗೆ ಮಾತ್ರ ಜಗತ್ತಿನಲ್ಲಿ ಬೇಡಿಕೆ ಇರುವುದಲ್ಲ, ಎಲ್ಲ ಕ್ಷೇತ್ರಗಳ ಪರಿಣತರ ಅವಶ್ಯಕತೆ ಇದೆ. ಸೂಕ್ಷ್ಮಜೀವವಿಜ್ಞಾನವು ವಿಜ್ಞಾನ ವಿದ್ಯಾರ್ಥಿಗಳಿಗೂ ನವೀನ’ ಎಂದು ಸೈಂಟ್‌ಅಲೋಷಿಯಸ್ (ಪರಿಗಣಿತ ವಿಶ್ವವಿದ್ಯಾಲಯ) ಸೂಕ್ಷ್ಮಜೀವ ವಿಜ್ಞಾನ ವಿಭಾಗದ ಮುಖ್ಯಸ್ಥೆಡಾ. ವೈಶಾಲಿ ರೈ ಹೇಳಿದರು.
ವಿದ್ಯಾಗಿರಿ ಸುಂದರಿ ಆನಂದ ಆಳ್ವ ಆವರಣದ ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಶುಕ್ರವಾರ ಸೂಕ್ಷ್ಮಜೀವವಿಜ್ಞಾನ ವಿಭಾಗವು ಆಯೋಜಿಸಿದ ಪಿಯು ವಿದ್ಯಾರ್ಥಿಗಳಿಗೆ ಒಂದು ದಿನದ ಕಾರ್ಯಾಗಾರ ಮೈಕ್ರೋಸ್ಪಾರ್ಕ್ (ಕಾಣದಜಗತ್ತನ್ನು ಅನ್ವೇಷಿಸಿ) ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ವಿಜ್ಞಾನಕ್ಷೇತ್ರದ ಹೊಸ ಸಾಧ್ಯತೆ ಮತ್ತು ಆಯಾಮಗಳನ್ನು ಅನ್ವೇಷಿಸಬೇಕು. ನಿಮ್ಮ ಮಾತು ಮತ್ತು ಆಯ್ಕೆಗಳಲ್ಲಿ ಜವಾಬ್ದಾರಿ ಇರಬೇಕು ಎಂದರು.
ಥಾಮಸ್‌ ಆಲ್ವಾ ಎಡಿಸನ್ ವಿದ್ಯುತ್ ದೀಪ ಕಂಡುಹಿಡಿಯುವ ಪ್ರಯೋಗದಲ್ಲಿ ಸಾವಿರ ಬಾರಿ ವಿಫಲರಾಗಿರಬಹುದು. ಆದರೆ, ಅದು ವೈಫಲ್ಯವಲ್ಲ, ಸಾವಿರ ಸಾಧ್ಯತೆಗಳು ಎಂದು ಅವರು ವಿಶ್ಲೇಷಿಸಿದರು.
ಸುಸ್ಥಿರತೆ ಇಂದಿನ ಅಗತ್ಯವಾಗಿದೆ. ಉದ್ಯಮಶೀಲತಾ ಕ್ಷೇತ್ರದಲ್ಲಿ ಸೂಕ್ಷ್ಮ ಜೀವವಿಜ್ಞಾನಕ್ಕೆ ಬೇಡಿಕೆ ಇದೆ. ಇಂತಹ ಪ್ರಾಯೋಗಿಕ ಕಾರ್ಯಾಗಾರಗಳು ಜ್ಞಾನದ ಹಂಚಿಕೆಗೆ ಸಹಕಾರಿಎಂದು ಅವರು ವಿವರಿಸಿದರು.
ನಿಮ್ಮ ಬಳಿಗೆ ಹಲವು ಅವಕಾಶಗಳು ಬರಬಹುದು. ಆದರೆ, ನಿಮ್ಮಆಯ್ಕೆ ಬಗ್ಗೆ ಸೂಕ್ಷ್ಮಆಗಿರಬೇಕು ಎಂದು ಎಚ್ಚರಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ನಿನ್ನೆಯ ಆಧಾರದಲ್ಲಿ ಇಂದಿನ ಮಕ್ಕಳನ್ನು ತರಬೇತುಗೊಳಿಸಿದರೆ, ನಾಳೆ ಅವರು ವೃತ್ತಿಗೆ ಬಂದಾಗ ಏನೂ ತಿಳಿಯದಾಗುತ್ತಾರೆ. ಕಾಲದ ಸ್ಪಂದನೆ ಅವಶ್ಯಎಂದರು.
ಸೂಕ್ಷ್ಮಜೀವವಿಜ್ಞಾನದ ಮೇಲೆ ಜಗತ್ತು ನಿಂತಿದೆ. ಸೂಕ್ಷ್ಮಜೀವವಿಜ್ಞಾನ ಸಣ್ಣ ಕ್ಷೇತ್ರವಾದರೂ ಜಗತ್ತಿನ ಬಹುದೊಡ್ಡ ಸಮಸ್ಯೆಗಳನ್ನು ಬಗೆಹರಿಸುತ್ತಿದೆ. ಇದು ವೈದ್ಯಕೀಯ ಮತ್ತು ತಂತ್ರಜ್ಞಾನವನ್ನು ಒಳಗೊಂಡಿದೆ. ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ತನ್ಮಯತೆ ಬಹುಮುಖ್ಯಎಂದು ಅವರು ವಿವರಿಸಿದರು.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಮಾತನಾಡಿ, ಯಾವುದೇ ಕ್ಷೇತ್ರವನ್ನುಆಯ್ಕೆ ಮಾಡುವ ಮೊದಲು ಆಸಕ್ತಿ ಮುಖ್ಯ. ವೈದ್ಯಕೀಯ ಮತ್ತು ಎಂಜಿನಿಯರಿಂಗ್‌ ಎಂಬುದು ವಿಜ್ಞಾನದ ಎರಡು ಸಣ್ಣ ವಿಚಾರಗಳು.ವಿಜ್ಞಾನ ಕ್ಷೇತ್ರ ವಿಸ್ತೃತವಾಗಿದ್ದು, ಸಾರ್ವಕಾಲಿಕ ಸತ್ಯ ಎಂಬುದಿಲ್ಲ. ಇಂದಿನ ಪ್ರಮೇಯವು ನಾಳೆ ಅಪಥ್ಯವೂ ಆಗಬಹುದುಎಂದರು.
ಸೂಕ್ಷ್ಮಜೀವವಿಜ್ಞಾನ ವಿಭಾಗದ ಮುಖ್ಯಸ್ಥೆ ರಮ್ಯಾರೈಇದ್ದರು. ವಿದ್ಯಾರ್ಥಿ ಸಂಯೋಜಕರಾದ ಕೃತಿಮಾ ಭಟ್ ಸ್ವಾಗತಿಸಿ, ಸುಹಾಸ್ ವಂದಿಸಿದರು. ಮೇಘಾ ಬಿ.ವಿ. ಕಾರ‍್ಯಕ್ರಮ ನಿರೂಪಿಸಿದರು.