ಆಳ್ವಾಸ್ ತುಳು ಸಂಸ್ಕೃತಿ ಅಧ್ಯಯನ ಕೇಂದ್ರ

ಜಾಗತೀಕರಣದ ಪ್ರಭಾವ ಇಂದು ಎಲ್ಲೆಡೆ ವ್ಯಾಪಿಸುತ್ತಿದೆ. ಬದಲಾವಣೆ ಎಂಬುದು ಜೀವಂತ ಸಮಾಜದ ಲಕ್ಷಣ ಎಂಬುದನ್ನು ನಾವೆಲ್ಲಾ ಒಪ್ಪಿಕೊಳ್ಳಬೇಕು ಆದರೆ ಈ ಬದಲಾವಣೆಯ ಗತಿ ನಮ್ಮ ದೇಸಿ ನುಡಿ-ಸಂಸ್ಕೃತಿಯ ಬುಡ ಅಲುಗಾಡಿಸುವಂತಾಗಬಾರದು ಹೊಸತನ್ನು ಸ್ವೀಕರಿಸುತ್ತಲೇ ಈ ನೆಲದ ಜೀವನಮೌಲ್ಯ-ಕಲಾಮೌಲ್ಯಗಳು ಉಳಿಯುವಂತಾಗಬೇಕು. ಇಂತಹ ಸದಾಶಯದಿಂದ ಆಳ್ವಾಸ್ ತುಳು ಸಂಸ್ಕೃತಿ ಅಧ್ಯಯನ ಕೇಂದ್ರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಧ್ಯೇಯೋದ್ದೇಶ:-
  • ಶಿಕ್ಷಣ-ಉದ್ಯೋಗದ ನೆಪದಲ್ಲಿ ಇಂಗ್ಲೀಷ್ ಎಲ್ಲೆಡೆ ವ್ಯಾಪಿಸುತ್ತಿದೆ. ಇದನ್ನು ಧನಾತ್ಮಕವಾಗಿ ಸ್ವೀಕರಿಸುವುದರ ಜೊತೆಗೆ ತುಳುವನ್ನು ಪ್ರತಿಯೊಬ್ಬರೂ ಅಭಿಮಾನದಿಂದ ಮಾತನಾಡುವ ವಾತಾವರಣವನ್ನು ರೂಪಿಸುವುದು. ಈ ಮೂಲಕ ಅಪಾರ ಶಬ್ಧ ಸಂಪತ್ತು ಇರುವ ತುಳು ಭಾಷೆಯನ್ನು ಮುಂದಿನ ತಲೆಮಾರಿಗೆ ದಾಟಿಸುವುದು.
  • ತುಳುನಾಡಿನ ಹಬ್ಬ, ಆಚರಣೆ ಆರಾಧನೆಗಳಲ್ಲಿ ಮನುಷ್ಯ ಸಂಬಂಧವನ್ನು ಕಾಪಾಡುವ, ನಿಸರ್ಗವನ್ನು ಗೌರವಿಸುವ ಜೀವನಾದರ್ಶಗಳಿವೆ. ಈ ಕುರಿತು ಕಮ್ಮಟ-ಗೊಷ್ಠಿಗಳನ್ನು ಆಯೋಜಿಸಿ ಪರಿಚಯಿಸುವುದು.
  • ತುಳು ಸಾಹಿತ್ಯದ ಅಸ್ತಿತ್ವ ಇರುವುದು ಭತ್ತದ ಕೃಷಿಯಲ್ಲಿ ವಾಣಿಜ್ಯಪರತೆ ಬೆಳೆಯುತ್ತಿರುವ ಇಂದಿನ ದಿನಮಾನಗಳಲ್ಲಿ ಭತ್ತದ ಕೃಷಿ ಹಾಗೂ ತುಳು ಜನಪದ ಸಾಹಿತ್ಯ ಉಳಿವಿನ ಬಗ್ಗೆ ಪ್ರಾಯೋಗಿಕ ಕಾರ್ಯಗಳನ್ನು ನಿರ್ವಹಿಸುವುದು. ಇಂತಹ ಆಶಯಗಳನ್ನು ಸಾಕಾರಗೊಳಿಸುವ ದೃಷ್ಟಿಯಿಂದ ತುಳುನಾಡಿನ ಸಾಂಪ್ರದಾಯಿಕ ಕಂಬಳ, ತುಳು ನುಡಿಸಿರಿ, ತುಳು ಭಾಷೆ-ಸಾಹಿತ್ಯ ಅಧ್ಯಯನ ಕಮ್ಮಟಗಳನ್ನು ನುಡಿ-ಸಂಸ್ಕೃತಿಯ ಪ್ರೀತಿಯಿಂದ ಆಳ್ವಾಸ್ ತುಳು ಸಂಸ್ಕೃತಿ ಅಧ್ಯಯನ ಕೇಂದ್ರವು ಆಯೋಜಿಸಿಕೊಂಡು ಬರುತ್ತಿದೆ.


About Alva's

Alva’s Education Foundation is a multifaceted organization founded by Dr. M. Mohan Alva and it is considered as the crown of Moodbidri.