Alva's College, Moodbidri

“ಮಾಧ್ಯಮ ಸಮಾಜ ಮುಖಿಯಾಗಿರಲಿ” : ನಿತ್ಯಾನಂದ ಪಡ್ರೆ

Alvas-Journalism-Press-Day-Mirror-release

ವಿದ್ಯಾಗಿರಿ, ಜುಲೈ 1: ಆಳ್ವಾಸ್ ಪತ್ರಿಕೋದ್ಯಮ ವಿಭಾಗದ ವತಿಯಿಂದ “ಪತ್ರಿಕಾ ದಿನಾಚರಣೆ”ಯನ್ನು ಸೆಮಿನಾರ್ ಹಾಲ್‍ನಲ್ಲಿ ಆಚರಿಸಲಾಯಿತು. ಸಮಾರಂಭದ ಮುಖ್ಯ ಅತಿಥಿಯಾಗಿ ಉದಯವಾಣಿ ಪತ್ರಿಕೆಯ ಹಿರಿಯ ಉಪಸಂಪಾದಕರಾದ ನಿತ್ಯಾನಂದ ಪಡ್ರೆಯವರು ಆಗಮಿಸಿದ್ದರು.

ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪಡ್ರೆಯವರು ದೃಶ್ಯ, ರೇಡಿಯೋ ಮತ್ತು ಪತ್ರಿಕಾ ಮಾಧ್ಯಮಗಳು ಇಂದು ಎಷ್ಟು ಪ್ರಭಾವಶಾಲಿಯಾಗಿದೆ ಮತ್ತು ಇಲ್ಲಿ ಆಗುವಂತಹ ಸಣ್ಣಪುಟ್ಟ ತಪ್ಪುಗಳು ಯಾವ ರೀತಿಯ ಪರಿಣಾಮವನ್ನು ಉಂಟು ಮಾಡಬಲ್ಲದು ಎಂಬುದರ ಕುರಿತಾಗಿ ಹೇಳಿದರು. ಸಾಂಸಾರಿಕ ಜೀವನದ ಒತ್ತಡವಿದ್ದರೂ ಸಮಯವನ್ನು ಲೆಕ್ಕಿಸದೆ ಪತ್ರಿಕೋದ್ಯಮಕ್ಕಾಗಿ ತಮ್ಮನ್ನು ತಾವು ಮುಡಿಪಾಗಿರಿಸುವ ಅಗತ್ಯ ಇಂದಿನ ಪತ್ರಕರ್ತರಿಗಿದೆ ಎಂದು ಅವರು ಹೇಳಿದರು. ಪ್ರೋ. ಕುರಿಯನ್ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಾಧ್ಯಮದ ಮಹತ್ವದ ಕುರಿತಾಗಿ ಮಾತನಾಡಿದರು. ಆಳ್ವಾಸ್ ಪತ್ರಿಕೋದ್ಯಮ ವಿಭಾಗದ ಪ್ರಾಯೋಗಿಕ ಪತ್ರಿಕೆ “ಆಳ್ವಾಸ್ ಮಿರರ್” ಮತ್ತು ಬಿತ್ತಿ ಪತ್ರಿಕೆಯಾದ “ಸುದ್ದಿಮನೆ”ಯನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.
ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆಯಾದ ಮೌಲ್ಯ ಜೀವನ್‍ರವರು ಸ್ವಾಗತಿಸಿದರು. ಉಪನ್ಯಾಸಕ ಶ್ರೀನಿವಾಸ ಪೆಜತ್ತಾಯ ವಂದಿಸಿದರು. ವಿದ್ಯಾರ್ಥಿನಿ ರಶ್ಮಿತಾ ಕಾರ್ಯಕ್ರಮ ನಿರೂಪಿಸಿದರು. ಮೂಡಬಿದರೆಯ ಪತ್ರಕರ್ತರು ಹಾಗೂ ವಿವಿಧ ವಿಭಾಗಗಳ ಉಪನ್ಯಾಸಕರು ಉಪಸ್ಥಿತರಿದ್ದರು.

Highslide for Wordpress Plugin