ತಾಂತ್ರಿಕ ಮೌಲ್ಯಮಾಪನ ಮಾತ್ರ ನಂಬಿ : ಹರೀಶ್ ಬಿ

dsc_0032-1

dsc_0043ಮೂಡಬಿದಿರೆ: “ಮಾರುಕಟ್ಟೆಯಲ್ಲಿ ಕಾಣಬರುವ ಪ್ರಸ್ತುತತೆಗಳನ್ನು ತಿಳಿದು ಅವುಗಳ ಆಧಾರದ ಮೇಲೆ ಷೇರು ಮಾರುಕಟ್ಟೆಯ ಪರಿಸ್ಥಿತಿಯನ್ನು ಅಳೆಯುವುದೇ ತಾಂತ್ರಿಕ ಮೌಲ್ಯಮಾಪನ. ಬುದ್ಧಿವಂತ ವ್ಯಾಪಾರಸ್ಥರು ತಾಂತ್ರಿಕ ಮೌಲ್ಯಮಾಪನವನ್ನು ಮಾತ್ರ ನಂಬಿ ಷೇರು ಮಾರುಕಟ್ಟೆಯಲ್ಲಿ ವಹಿವಾಟು ನಡೆಸುತ್ತಾರೆ. ಭಾವನಾತ್ಮಕ ಪರಿಣಾಮಗಳನ್ನು ಮೀರಿ ಷೇರು ಮಾರುಕಟ್ಟೆಯಲ್ಲಿ ಸಫಲತೆ ಸಾಧಿಸಲು ತಾಂತ್ರಿಕ ಮೌಲ್ಯಮಾಪನವೇ ಪ್ರಮುಖ ಮಾರ್ಗ” ಎಂದು ಮೋತೀಲಾಲ್ ಓಸ್ವಾಲ್ ಸೆಕ್ಯೂರಿಟಿಸ್ ಸಂಸ್ಥೆಯ ಉಡುಪಿ ಪ್ರಾಂತ್ಯದ ಬಿಸಿನೆಸ್ಸ್ ಅಸೋಸಿಯೇಟ್ ಹರೀಶ್ ಬಿ ನುಡಿದರು. ಅವರು ಆಳ್ವಾಸ್ ಶಿಕ್ಷಣ ಸಂಸ್ಥೆಯ ವಾಣಿಜ್ಯ ಸ್ನಾತಕೋತ್ತರ ವಿಭಾಗ ನಡೆಸಿದ ‘ತಾಂತ್ರಿಕ ಮೌಲ್ಯಮಾಪನ (ಟೆಕ್ನಿಕಲ್ ಅನಾಲಿಸಿಸ್)’ ವಿಷಯದಡಿ ನಡೆದ ಕಾರ್ಯಗಾರದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.

“ಷೇರು ಮಾರುಕಟ್ಟೆಯಲ್ಲಿ ಸಫಲತೆ ಗಳಿಸಲು ಅತಿ ಬುದ್ಧಿವಂತಿಕೆ ಅವಶ್ಯವಿಲ್ಲ. ಅನೇಕ ಉದ್ಯಮಿಗಳು ಅಲ್ಪ-ಸ್ವಲ್ಪ ಜ್ಞಾನದೊಂದಿಗೆ ಷೇರು ಮಾರುಕಟ್ಟೆ ಪ್ರವೇಶಿಸಿ ಯಶಸ್ಸು ಗಳಿಸಿದ್ದಾರೆ. ಕೇವಲ, ಷೇರು ಮಾರುಕಟ್ಟೆಯಲ್ಲಿ ಅತೀ ಕಡಿಮೆ ದರದಲ್ಲಿ ಷೇರು ಖರೀದಿಸಿ ಅತೀ ಹೆಚ್ಚು ದರದಲ್ಲಿ ಮಾರಾಟ ಮಾಡುವುದು ಹಾಗೂ ಹೆಚ್ಚಿನ ದರದ ಷೇರನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದರೊಂದಿಗೆ ಈ ಎರಡರ ಮಧ್ಯೆ ಸಮತೋಲನ ಕಾಪಾಡಿಕೊಳ್ಳುವ ಕಲೆಯನ್ನು ಅರಿತಿರಬೇಕು” ಎಂದು ಅವರು ನುಡಿದರು.

ಕಾರ್ಯಗಾರದ ನಂತರ ಸಂವಾದ ಕಾರ್ಯಕ್ರಮ ನಡೆಯಿತು. ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಾಣಿಜ್ಯ ವಿಭಾಗದ ಉಪನ್ಯಾಸಕರುಗಳಾದ ಪ್ರೋ ಪವನ್ ಕಿರಣಕೆರೆ, ಝೀವಲ್ ಖಾನ್ ಹಾಗೂ ಶಿವಕುಮಾರ್ ಉಪಸ್ಥಿತರಿದ್ದರು. ದೀಕ್ಷಾ ರಾಜ್ ನಿರೂಪಿಸಿ ವಂದಿಸಿದರು.


About Alva's

Alva’s Education Foundation is a multifaceted organization founded by Dr. M. Mohan Alva and it is considered as the crown of Moodbidri.