ಆಳ್ವಾಸ್ ಪದವಿ ಕಾಲೇಜಿನ ಬಾಟನಿ ವಿಭಾಗದಿಂದ ವಿಶೇಷ ಉಪನ್ಯಾಸ

Alvas Botony Deptಮೂಡಬಿದಿರೆ: ಭಾರತ ಆರ್ಥಿಕತೆಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದ್ದರೂ, ನೈಸರ್ಗಿಕ ಸಂಪನ್ಮೂಲದಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರದ ಸಾಲಿನಲ್ಲಿ ನಿಲ್ಲುತ್ತದೆ ಎಂದು ಬೆಂಗಳೂರಿನ ಸೆಲ್ಯುಲರ್ ಆ್ಯಂಡ್ ಮೋಲಿಕ್ಯುಲರ್ ಪ್ಲಾಟಫಾರ್ಮನ ನಿರ್ದೇ±ತಿಳಿಸಿದರು.
ಅವರು ಆಳ್ವಾಸ್ ಪದವಿ ಕಾಲೇಜಿನ ಬಾಟನಿ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತ ವಿಫುಲ ನೈಸರ್ಗಿಕ ಸಂಪನ್ಮೂಲವನ್ನು ಹೊಂದಿದ ರಾಷ್ಟ್ರ. ಇದರ ಸದ್ಬಳಕೆ ಪ್ರತಿಯೊಬ್ಬರ ಕರ್ತವ್ಯ. ವಿದ್ಯಾವಂತ ಸಮಾಜ ಸದಾ ಈ ಸಂಪತ್ತಿನ ರಕ್ಷಣೆಯಲ್ಲಿ ತೊಡಗಬೇಕು. ಮಾನವ ದುರಾಸೆಗೆ ಬಲಿಯಾಗಿ ಪ್ರಕೃತಿಯನ್ನು ಶೋಷಣೆ ಮಾಡುವ ಬದಲು, ಪ್ರಕೃತಿಯ ಪಾಲನೆಯಲ್ಲಿ ತೊಡಗಬೇಕು. ಕೆರೆಗಳ ಪುನಶ್ಚೇತನ, ಮರಗಳನ್ನು ಬೆಳಸುವುದರ ಮೂಲಕ ಅಂತರ್ಜಲದ ಮಟ್ಟವನ್ನು ಏರಿಸಿ, ಭೂವಿಯನ್ನು ಸಕಲ ಜೀವರಾಶಿಗಳಿಗೂ ಜೀವಿಸಲು ಯೋಗ್ಯವಾದ ಸ್ಥಳವನ್ನಾಗಿಸುವಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅದ್ಯಕ್ಷತೆವಹಿಸಿದ್ದ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಹುಟ್ಟು ಹಬ್ಬದ ಸವಿನೆನಪಿಗಾಗಿ ಒಂದು ಗಿಡವನ್ನು ನೆಟ್ಟು, ಕನಿಷ್ಠ ಪಕ್ಷ ಮೂರು ವರ್ಷಗಳ ಕಾಲ ಆ ಗಿಡವನ್ನು ಸಂರಕ್ಷಿಸುವ ಪಣ ತೊಡಬೇಕು. ಬರ್ತಡೇ ಪಾರ್ಕ್ ನಿರ್ಮಿಸುವಲ್ಲಿಯಲ್ಲಿ ಯೋಜನೆಗಳನ್ನು ರೂಪಿಸಬಹುದು ಎಂದರು. ಡಾ.ಮಲಾಲಿ ಗೌಡರ ಮುಂದಾಳತ್ವದಲ್ಲಿ ನಡೆಯುತ್ತಿರುವ `ಬಯೊ-ಡೈರ್ವಸಿಟಿ ಕನ್ಸ್ವೇಶನ್ ಆ್ಯಂಡ್ ರಿಸರ್ಚ್’ ಎನ್ಜಿಒ ಸಂಸ್ಥೆ ತನ್ನ ಕಾರ್ಯವನ್ನು ಮಾತಿಗಷ್ಟೇ ಸೀಮಿತಗೊಳಿಸದೆ, ಕ್ರಿಯೆಯಲ್ಲಿ ಮಾಡಿ ತೋರಿಸಿದ ಹೆಮ್ಮೆಯ ಸಂಸ್ಥೆ ಎಂದು ಶ್ಲಾಘಿಸಿದರು.
ಎಂಎಸ್ಸಿ ಬಾಟನಿ ವಿದ್ಯಾರ್ಥಿನಿ ಅನನ್ಯ ತನ್ನ ಹುಟ್ಟು ಹಬ್ಬದ ಸವಿನೆನೆಪಿಗಾಗಿ ಅಶೋಕ ಗಿಡವನ್ನು ನೆಟ್ಟರು.
ಕಾರ್ಯಕ್ರಮದಲ್ಲಿ ಪದವಿ ಕಾಲೇಜಿನ ಸೈನ್ಸ್ ಡೀನ್ ರಮ್ಯಾ ರೈ ಪಿ.ಡಿ, ಉಪನ್ಯಾಸಕ ಅರುಣಕುಮಾರ್ ಮತ್ತಿತರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅಯನ ಕಾರ್ಯಕ್ರಮ ನಿರ್ವಹಿಸಿದರು.


About Alva's

Alva’s Education Foundation is a multifaceted organization founded by Dr. M. Mohan Alva and it is considered as the crown of Moodbidri.