ಆಳ್ವಾಸ್ ಕಾಲೇಜಿನ ಸ್ನಾತ್ತಕೋತ್ತರ ಆ್ಯನಾಲಿಟಿಕಲ್ ಕೆಮೆಸ್ಟ್ರಿ ದಶಕದ ಸಂಭ್ರಮ

ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಸ್ನಾತ್ತಕೋತ್ತರ ಆ್ಯನಾಲಿಟಿಕಲ್ ಕೆಮೆಸ್ಟ್ರಿ ತನ್ನ ವಿಭಾಗದ ದಶಕದ ಸಂಭ್ರಮವನ್ನು ಕಾಲೇಜಿನ ಆರ್ಯುವೇದ ಸಭಾಂಗಣದಲ್ಲಿ ಹಮ್ಮಿಕೊಂಡಿತ್ತು. ವಿಭಾಗದ ಕೆಮಿಕಲ್ ಸೊಸೈಟಿ ಪೋರಂನ ಉದ್ಘಾಟನೆ ಹಾಗೂ ವಿದ್ಯಾರ್ಥಿಗಳಿಗೆ ಅತಿಥಿ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  ಬಿಎಎಸೆಫ್ ಸುರತ್ಕಲ್‍ನ ಹಿರಿಯ ಕಾರ್ಯನಿರ್ವಾಹಕ  ಸಂದೀಪ್, `ರಸಾಯನಶಾಸ್ತ್ರದ ಭವಿಷ್ಯತ್‍ನ ರಹದಾರಿ’ ಎಂಬ ವಿಷಯದ ಕುರಿತು ಮಾತನಾಡಿದರು. ಸಾಮಥ್ರ್ಯ ಹಾಗೂ ದೌರ್ಬಲ್ಯಗಳ ಯಶಸ್ವಿ ನಿರ್ವಹಣೆಯೇ ಗೆಲುವಿನ ಗುಟ್ಟು .ಪ್ರತಿಯೊಬ್ಬರಲ್ಲೂ ವಿಫುಲವಾದ ಸಾಮಾಥ್ರ್ಯವಿದ್ದು, ಸುಸ್ಥಿರ ಹಾಗೂ ಪರಿಣಾಮಕಾರಿ ಹೊಸ ಅಲೆಯ ನಿರ್ಮಾತೃ ನೀವಾಗಬೇಕು ಧನಾತ್ಮಕ ಚಿಂತನೆಯಿಂದ ವ್ಯಕ್ತಿ ಚೈತನ್ಯದ ಹೊಸ ನೆಲೆಯನ್ನು ಕಂಡುಕೊಳ್ಳಬಹುದೇ ಹೊರತು, ಋಣಾತ್ಮಕತೆಯಿಂದಲ್ಲ. ಶಿಕ್ಷಣವೆಂದರೆ ಉದ್ಯೋಗದ ಭರವಸೇ ಮಾತ್ರವಲ್ಲ, ಕಲಿಕೆಯ ನಿರಂತರ ಪ್ರಕ್ರಿಯೆ ಎಂದರು. ಆ್ಯನಾಲಿಟಿಕಲ್ ಕೆಮೆಸ್ಟ್ರಿ ವಿಭಾಗವು ಉದ್ಯೋಗಗಳ ಮಹಾಪೂರವಾಗಿದ್ದು, ವಿದ್ಯಾರ್ಥಿಗಳು ಫುಡ್ ಆ್ಯಂಡ್ ಫಾರ್ಮಾಸಿಟಿಕಲ್ ಇಂಡಸ್ಟ್ರಿ, ಕಾರ್ಸೋಮೆಟಿಕ್ ಇಂಡಸ್ಟ್ರಿ, ಫೋರೆನ್ಸಿಕ್ ಸೈನ್ಸ್, ಟೊಕ್ಸಿಕೋಲಾಜಿ, ಡ್ರಗ್ ಡೆವಲಪ್‍ಮೆಂಟ್, ಪೋಲ್ಯುಷನ್

ಕಂಟ್ರೋಲ್ ಬೋರ್ಡ್, ಬಯೋಕೆಮಿಕಲ್ ಇಂಡಸ್ಟ್ರಿ, ಜಿಯೋಕೆಮೆಸ್ಟ್ರಿ, ಆಯಿಲ್ ಆ್ಯಂಡ್ ಪೆಟ್ರೋಲಿಯಂ, ಮೆಟಿರಿಯಲ್ ಸೈನ್ಸ್, ಬಯೋಟೆಕ್ನಾಲಜಿ, ಎನ್ವಿರನ್‍ಮೆಂಟಲ್ ಕೆಮೆಸ್ಟ್ರಿ, ಫುಡ್ ಆ್ಯಂಡ್ ಬೆವರೇಜ್ , ಕ್ವಾಲಿಟಿ ಕಂಟ್ರೋಲ್ ಆಫೀಸರ್, ಕ್ವಾಲಿಟಿ  ಆ್ಯಶ್ಯುರೆನ್ಸ್ ಸೆಲ್‍ಗಳಲ್ಲಿ ಉದ್ಯೋಗ ಪಡೆಯಬಹುದು ಎಂದು ತಿಳಿಸಿದರು.    ಪ್ರತಿಷ್ಠಿತ ಪರೀಕ್ಷೆಗಳಾದ ಸ್ಯಾಟ್, ಟೂಫಲ್, ಐಯಲ್ಟ್ಸ್‍ಗಳಲ್ಲಿ ಉತ್ತೀರ್ಣರಾಗಿ ವಿದೇಶದಲ್ಲಿ ಉನ್ನತ ವ್ಯಾಸಂಗವನ್ನು ಪಡೆಯಬಹುದು ಎಂದರು.

ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಸಮಾರಂಭದ ಅಧ್ಯಕ್ಷತೆವಹಿಸಿದ್ದರು.`ಕೆಮ್ ಮ್ಯಾಗಜಿನ್’ ಅನ್ನು ಬಿಡುಗಡೆಗೊಳಿಸಲಾಯಿತು. ವಿಭಾಗದ ದಶಕದ ಸಂಭ್ರಮವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿಕೊಳ್ಳಲಾಯಿತು.

ಸಮಾರಂಭದಲ್ಲಿ ಕಾರ್ಯಕ್ರಮದ ಸಂಯೋಜಕ ಡಾ ಶರತ್, ಕೆಮಿಕಲ್ ಸೊಸೈಟಿ ಫೋರ್‍ಂ ಅಧ್ಯಕ್ಷ  ಡಾ.ರಾಕೇಶ್, ಪ್ರೊ. ಸುಕನ್ಯಾ, ವಿದ್ಯಾರ್ಥಿ ಸಂಯೋಜಕರಾದ ಸ್ನೇಹಾ ಹೆಗ್ಡೆ, ಮಲ್ಲಿಕಾರ್ಜುನ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸ್ವಾತಿ ಶೆಟ್ಟಿ ನಿರೂಪಿಸಿದರು. ಸ್ನೇಹಾ ಹೆಗ್ಡೆ ಸ್ವಾಗತಿಸಿದರು. ರೂವೇನಾ ವಂದಿಸಿದರು.

 


About Alva's

Alva’s Education Foundation is a multifaceted organization founded by Dr. M. Mohan Alva and it is considered as the crown of Moodbidri.