Alva's College, Moodbidri

ದ.ಕ.ಜಿಲ್ಲಾ ಪ್ರತಿಭಾಕಾರಂಜಿ-2016: ಆಳ್ವಾಸ್‍ಗೆ ನಾಲ್ಕು ಪ್ರಥಮ, ಒಂದು ದ್ವಿತೀಯ ಪ್ರಶಸ್ತಿ

ದ.ಕ.ಜಿಲ್ಲಾ ಪಂಚಾಯತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ ಆಶ್ರಯದಲ್ಲಿ ಸರಕಾರಿ ಪದವಿ ಪೂರ್ವಕಾಲೇಜು ಕಾವಳಪಡೂರು, ವಗ್ಗ, ಬಂಟ್ವಾಳ ತಾಲ್ಲೂಕುಇಲ್ಲಿ ನಡೆದ ದಕ್ಷಿಣಕನ್ನಡ ಜಿಲ್ಲಾ ಮಟ್ಟದ ‘’ಪ್ರತಿಭಾಕಾರಂಜಿ 2016’’ ರಲ್ಲಿ ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಹಿರಿಯರ ವಿಭಾಗದಲ್ಲಿ ನಾಲ್ಕು ಪ್ರಥಮ ಹಾಗೂ ಒಂದು ದ್ವಿತೀಯ ಪ್ರಶಸ್ತಿ ಪಡೆದಿರುತ್ತಾರೆ.
ಫ್ಯಾನ್ಸಿ ಡ್ರೆಸ್ಸ್ ಸ್ಪರ್ಧೆಯಲ್ಲಿ ಹತ್ತನೇ ತರಗತಿಯ ನೆಯೋಲ ಪ್ರಥಮ, ಮಿಮಿಕ್ರಿಯಲ್ಲಿ ಜಯಂತ್ ಪ್ರಥಮ, ಭಾವ ಗೀತೆ ಸ್ಪರ್ದೆಯಲ್ಲಿ ಅಮೃತಾ ಕುಮಾರಿ ಪ್ರಥಮ, ಗಜಲ್ ನಲ್ಲಿ ಶ್ರದ್ದಾ ಎಂ ಪ್ರಥಮ ಹಾಗೂ ಇಂಗ್ಲೀಷ ಭಾಷಣ ಸ್ಪರ್ಧೆಯಲ್ಲಿ ಒಂಬತ್ತನೆ ತರಗತಿಯ ಧಾತ್ರಿ ಪ್ರಸನ್ನ ದ್ವಿತೀಯ ಸ್ಥಾನ ಪಡೆದಿರುತ್ತಾರೆ.  ಈ ಮೂಲಕ ಪ್ರಶಸ್ತಿ ಪಡೆದ ಐವರು ವಿದ್ಯಾರ್ಥಿಗಳು ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ
ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿ ಸಂಸ್ಥೆಯ ಅದ್ಯಕ್ಷರಾದ ಡಾ ಎಂ ಮೋಹನ್ ಆಳ್ವ, ಪ್ರಾಚಾರ್ಯ ಹಾಗೂ ಶಿಕ್ಷಕ ವರ್ಗದವರು, ಹರ್ಷ ವ್ಯಕ್ತಪಡಿಸಿದ್ದಾರೆ.

Highslide for Wordpress Plugin