Alva's College, Moodbidri

ದಕ್ಷಿಣ ವಲಯ ಜ್ಯೂನಿಯರ್ ಅಥ್ಲೆಟಿಕ್ಸ್: ಆಳ್ವಾಸ್ ಕ್ರೀಡಾಪಟುಗಳಿಂದ ಸಾಧನೆ

ಮೂಡುಬಿದಿರೆ: ತಿರುವನಂತಪುರಂ ಚಂದ್ರಶೇಖರ್ ನಾಯರ್ ಸ್ಟೇಡಿಯಂನಲ್ಲಿ ನಡೆದ 29ನೇ ಜ್ಯೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಆಳ್ವಾಸ್ ಒಟ್ಟು 39 ಪದಕಗಳನ್ನು ಗೆದ್ದು, ಸಾಧನೆ ಮಾಡಿದೆ.
ಆಳ್ವಾಸ್ ಸಂಸ್ಥೆಯು 6 ಚಿನ್ನದ ಪದಕ , 18 ಬೆಳ್ಳಿ ಹಾಗೂ 15 ಕಂಚಿನ ಪದಕಗಳನ್ನು ಪಡೆದಿದೆ. 18 ವರ್ಷದೊಳಗಿನ ಬಾಲಕರ ವಿಭಾಗದ ಜವಲಿನ್ ತ್ರೋನಲ್ಲಿ ಆಳ್ವಾಸ್ ಮನು ಡಿ.ಪಿ ನೂತನ ಕೂಟ ದಾಖಲೆಯನ್ನು ಮಾಡಿದ್ದಾರೆ. ಕ್ರೀಡಾಪಟುಗಳ ಸಾಧನೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.
South Zone Athletics

Highslide for Wordpress Plugin