Alva's College, Moodbidri

ಆಳ್ವಾಸ್ ಕಾಲೇಜಿನಲ್ಲಿ ‘ಸ್ವಚ್ಛತಾ ಅಭಿಯಾನ’

dsc_0152

 ಮೂಡಬಿದಿರೆ- ಜಗತ್ತು ಕಂಡ ಅಪ್ರತಿಮ ವ್ಯಕ್ತಿ ಮಹಾತ್ಮಗಾಂದಿಜೀ ತನ್ನ ಅಹಿಂಸಾ ತತ್ವದಿಂದ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು.ಅವರ ಸ್ವಚ್ಚತೆಯೆಡೆಗಿನ ಕಾಳಜಿ ನಮ್ಮೆಲ್ಲರಿಗೂ ಮಾದರಿ ಎಂದು ರಾಜೇಶ್ವರಿ ಇನ್ಪ್ರಾಟೆಕ್ ಮಾಲಕರಾದ ದೇವಿಪ್ರಸಾದ ಶೆಟ್ಟಿ ನುಡಿದರು. ಅವರು ಆಳ್ವಾಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ಎನ್.ಸಿ.ಸಿ, ರೆಡ್ ಕ್ರಾಸ್, ರೋವರ್ಸ್ ಮತ್ತು ರೇಂಜರ್ಸ್ ಮತ್ತು ರಾಜೇಶ್ವರಿ ಇನ್ಪ್ರಾಟೆಕ್ ವತಿಯಿಂದ ನಡೆದ ಸ್ವಚ್ಛತಾ ಆಂದೋಲನ ಹಾಗೂ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ‘’ನಮ್ಮ ಪರಿಸರದ ರಕ್ಷಣೆ ನಮ್ಮ ಹೊಣೆ’’ ಎಂಬ ಮನೋಭಾವ ಜನರಲ್ಲಿ ಮೂಡಿದ ದಿನ ನಮ್ಮ ದೇಶ ಸರ್ವಶ್ರೇಷ್ಠ ದೇಶವಾಗಿ ಹೊರಹೊಮ್ಮಲಿದೆ ಎಂದರು. ದೇಶದ ಪ್ರಧಾನಿ ನರೇಂದ್ರ ಮೋದಿಯವರು ಈ ಹಿನ್ನಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದ್ದಾರೆ. ನಮ್ಮ ಪರಿಸರವನ್ನು ಮೊದಲು ಶುಚಿಯಾಗಿಟ್ಟುಕೊಳ್ಳೋಣ ಎಂದು ದೇವಿಪ್ರಸಾದ್ ಶೆಟ್ಟಿಯವರು ತಿಳಿಸಿದರು.
ಸಭಾ ಕಾರ್ಯಕ್ರಮದ ನಂತರ ಸ್ವಚ್ಛತಾ ಅಭಿಯಾನ ವಿದ್ಯಾರ್ಥಿಗಳಿಂದ ನಡೆಯಿತು. ಈ ಕಾರ್ಯಕ್ರಮದಲ್ಲಿ ಎನ್.ಸಿ.ಸಿ ಅಧಿಕಾರಿಗಳು ಗುರುದೇವ್, ಚಂದ್ರಶೇಖರ್ ಗೌಡ, ರೋವರ್ಸ್ ರೇಂಜರ್ಸ್‍ನ ಯೋಗೇಶ್, ಅಕ್ಷತಾ, ರೆಡ್ ಕ್ರಾಸ್‍ನ ಪೂರ್ಣಿಮಾ, ಜಯಶ್ರೀ, ಮನು ಡಿ.ಎಲ್, ಎನ್.ಸಿ.ಸಿ ಕೆಡೆಟ್ ಕೀರ್ತನ್ ಉಪಸ್ಥಿತರಿದ್ದರು.

Highslide for Wordpress Plugin