Alva's College, Moodbidri

News

ಮಂಗಳೂರು ವಿ.ವಿ ಕ್ರಾಸ್‍ಕಂಟ್ರಿ: ಆಳ್ವಾಸ್ ಚಾಂಪಿಯನ್

ಮೂಡುಬಿದಿರೆ: ಆಳ್ವಾಸ್ ಕಾಲೇಜು ಮೂಡುಬಿದಿರೆ ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಜಂಟಿ ಆಶ್ರಯದಲ್ಲಿ ಮಂಗಳೂರು ವಿ.ವಿ ಅಂತರ್ ಕಾಲೇಜು ಕ್ರಾಸ್ಕಂಟ್ರಿ ಚಾಂಪಿಯನ್ಶಿಪ್ನಲ್ಲಿ ಅತಿಥೇಯ ಆಳ್ವಾಸ್ ಕಾಲೇಜು ಪುರುಷ ಹಾಗೂ ಮಹಿಳಾ ತಂಡಗಳು ಚಾಂಪಿಯನ್ ಆಗಿ ಮೂಡಿಬಂದಿದೆ. ಆಳ್ವಾಸ್ ಹುಡುಗರ ತಂಡ 15ನೇ ಬಾರಿ ಚಾಂಪಿಯನ್ ಆಗಿ ಮೂಡಿಬಂದಿದ್ದು, ಕುರುಂಜಿ ವಿಶ್ವನಾಥ ಗೌಡ ಸ್ಮರಣಾರ್ಥ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಆಳ್ವಾಸ್ ಹುಡುಗಿಯರ ತಂಡವು 14ನೇ ಬಾರಿಗೆ ಚಾಂಪಿಯನ್ ಆಗಿ ಮೂಡಿಬಂದಿದ್ದು, ಕೈಕುರೆ ಶ್ರೀರಾಮಣ್ಣ ಗೌಡ ಸ್ಮರಣಾರ್ಥ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಪುರುಷರ ವಿಭಾಗದಲ್ಲಿ […]

Read More

ಆಳ್ವಾಸ್ ಪದವಿ ಕಾಲೇಜಿನ ಬಾಟನಿ ವಿಭಾಗದಿಂದ ವಿಶೇಷ ಉಪನ್ಯಾಸ

ಮೂಡಬಿದಿರೆ: ಭಾರತ ಆರ್ಥಿಕತೆಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದ್ದರೂ, ನೈಸರ್ಗಿಕ ಸಂಪನ್ಮೂಲದಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರದ ಸಾಲಿನಲ್ಲಿ ನಿಲ್ಲುತ್ತದೆ ಎಂದು ಬೆಂಗಳೂರಿನ ಸೆಲ್ಯುಲರ್ ಆ್ಯಂಡ್ ಮೋಲಿಕ್ಯುಲರ್ ಪ್ಲಾಟಫಾರ್ಮನ ನಿರ್ದೇ±ತಿಳಿಸಿದರು. ಅವರು ಆಳ್ವಾಸ್ ಪದವಿ ಕಾಲೇಜಿನ ಬಾಟನಿ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತ ವಿಫುಲ ನೈಸರ್ಗಿಕ ಸಂಪನ್ಮೂಲವನ್ನು ಹೊಂದಿದ ರಾಷ್ಟ್ರ. ಇದರ ಸದ್ಬಳಕೆ ಪ್ರತಿಯೊಬ್ಬರ ಕರ್ತವ್ಯ. ವಿದ್ಯಾವಂತ ಸಮಾಜ ಸದಾ ಈ ಸಂಪತ್ತಿನ ರಕ್ಷಣೆಯಲ್ಲಿ ತೊಡಗಬೇಕು. ಮಾನವ ದುರಾಸೆಗೆ ಬಲಿಯಾಗಿ ಪ್ರಕೃತಿಯನ್ನು ಶೋಷಣೆ ಮಾಡುವ […]

Read More

ದಕ್ಷಿಣ ವಲಯ ಜ್ಯೂನಿಯರ್ ಅಥ್ಲೆಟಿಕ್ಸ್: ಆಳ್ವಾಸ್ ಕ್ರೀಡಾಪಟುಗಳಿಂದ ಸಾಧನೆ

ಮೂಡುಬಿದಿರೆ: ತಿರುವನಂತಪುರಂ ಚಂದ್ರಶೇಖರ್ ನಾಯರ್ ಸ್ಟೇಡಿಯಂನಲ್ಲಿ ನಡೆದ 29ನೇ ಜ್ಯೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಆಳ್ವಾಸ್ ಒಟ್ಟು 39 ಪದಕಗಳನ್ನು ಗೆದ್ದು, ಸಾಧನೆ ಮಾಡಿದೆ. ಆಳ್ವಾಸ್ ಸಂಸ್ಥೆಯು 6 ಚಿನ್ನದ ಪದಕ , 18 ಬೆಳ್ಳಿ ಹಾಗೂ 15 ಕಂಚಿನ ಪದಕಗಳನ್ನು ಪಡೆದಿದೆ. 18 ವರ್ಷದೊಳಗಿನ ಬಾಲಕರ ವಿಭಾಗದ ಜವಲಿನ್ ತ್ರೋನಲ್ಲಿ ಆಳ್ವಾಸ್ ಮನು ಡಿ.ಪಿ ನೂತನ ಕೂಟ ದಾಖಲೆಯನ್ನು ಮಾಡಿದ್ದಾರೆ. ಕ್ರೀಡಾಪಟುಗಳ ಸಾಧನೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.

Read More

ಆಳ್ವಾಸ್‍ನಲ್ಲಿ ಅತಿಥಿ ಉಪನ್ಯಾಸ ‘’ಸುಸ್ಥಿರ ಅಭಿವೃದ್ದಿಯತ್ತ ಭಾರತ’’

ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗದ ವತಿಯಿಂದ ಅತಿಥಿ ಉಪನ್ಯಾಸ ಕಾರ್ಯಕ್ರಮವನ್ನು ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಗುರುವಾರ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಶಿವಮೊಗ್ಗ ಡಿ.ವಿ.ಎಸ್ ಆಟ್ರ್ಸ್ ಆ್ಯಂಡ್ ಕಾಮರ್ಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎಂ ಕೆ ಕುಮಾರಸ್ವಾಮಿ “ಯಾವುದೇ ಒಂದು ವ್ಯವಸ್ಥೆ ತಪ್ಪನ್ನು ಮಾಡಿದಾಗ ಮಾತ್ರ ಅದರ ಅಸ್ಥಿತ್ವದ ನೆನಪಾಗುವುದು. ಜನಸಾಮಾನ್ಯರಲ್ಲಿ ಆರ್ಥಿಕ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ಎಂಬ ಕಲ್ಪನೆ ಇದ್ದು, ಆದರೆ ವಾಸ್ತವದಲ್ಲಿ ಪರಿಸರ ಮತ್ತು ಸಮಾಜದ ಬೆಳವಣಿಗೆಯೂ ಸಹ ದೇಶದ ಅಭಿವೃದ್ಧಿಯಲ್ಲಿ ಕೊಡುಗೆ […]

Read More

HR Education Creates Human Engineers, Says Dr.Ajith D’Souza.

Moodubidire: An intercollegiate level HR (Human Resource) seminar and research paper presentation programme was organised by Alva’s department of Management Studies and HRD, on Friday, at Kuvempu hall. The core topic of the session was “Training and Development”. The chief guest and the resource person Dr Ajith D’Souza, Director, Asha Jyothi Charitable Academy, Mangalore, said, […]

Read More

ALVA’S EDUCATION FOUNDATION AWARDED ONE AMONG TOP 25 PREPARATION CENTERS FOR CAMBRIDGE ENGLISH

Moodubidire: Alva’s Education Foundation accoladed with prestigious award of, one among the of top 25 preparation centers in South Asia by Cambridge English Assessment for Higher Education, UK. Cambridge English Assessment India hosted the award ceremony for top 25 preparation centres in South Asia on 21st September at British Deputy High Commissioner’s Office in Chennai. […]

Read More

ಕ್ರಿಯಾತ್ಮಕ ಬರವಣಿಗೆಗೆ ಕಲ್ಪನಾಶಕ್ತಿ ಅಗತ್ಯ

ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರಗಳ ತಯಾರಿಕೆಯಲ್ಲಿ ಕಲ್ಪನೆ ಮತ್ತು ಕ್ರಿಯಾಶೀಲತೆ ಬಹುಮುಖ್ಯ ಪಾತ್ರವಹಿಸುತ್ತದೆ. ದೈನಂದಿನ ಆಗುಹೋಗುಗಳನ್ನು ವಿಭಿನ್ನವಾಗಿ ಗ್ರಹಿಸುವ ಹವ್ಯಾಸವನ್ನು ಬೆಳೆಸಿಕೊಂಡರೆ ಉತ್ತಮ ಕಥಾಹಂದರವನ್ನು ಹೊಂದಿದ ಕಿರುಚಿತ್ರಗಳನ್ನು ತಯಾರಿಸಲು ಸಾಧ್ಯ ಎಂದು ಉಜಿರೆ ಎಸ್.ಡಿ.ಎಂ ಕಾಲೇಜು ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಸುನಿಲ್ ಹೆಗ್ಡೆ ಮತ್ತು ಎಸ್.ಡಿ.ಎಂ ಮಲ್ಟಿಮೀಡಿಯಾ ಸ್ಟುಡಿಯೋ ಕಾರ್ಯನಿರ್ವಾಹಕ ಮಾಧವ ಹೊಳ್ಳ ಅಭಿಪ್ರಾಯಪಟ್ಟರು. ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗಾಗಿ ನಡೆದ ‘ವೀಡಿಯೋ ಪ್ರೊಡಕ್ಷನ್ ಮತ್ತು ಕ್ರಿಯಾತ್ಮಕ ಬರವಣಿಗೆ’ಯ ಬಗೆಗಿನ ಒಂದು ದಿನದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ […]

Read More

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುವ ಹದಿನಾಲ್ಕನೇ ವರ್ಷದ ಕನ್ನಡ ನಾಡು ನುಡಿ ಸಂಸ್ಕøತಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ 2017 ಡಿಸೆಂಬರ್ 1ರಿಂದ 3ರವರೆಗೆ ವಿದ್ಯಾಗಿರಿಯಲ್ಲಿ ನಡೆಯಲಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಡಿಸೆಂಬರ್ 1ರಂದು ಬೆಳಿಗ್ಗೆ ಸಮ್ಮೇಳನ ಉದ್ಘಾಟನೆಗೊಳ್ಳಲಿದ್ದು 3ರಂದು ಸಮಾಪನಗೊಳ್ಳಲಿದೆ. ಸಮ್ಮೇಳನದ ರೂಪುರೇಖೆಗಳ ಕುರಿತು ಚರ್ಚೆಗಳು ನಡೆಯುತ್ತಿದ್ದು ಶೀಘ್ರವಾಗಿ ಅಂತಿಮ ಸ್ಪರ್ಶ ನೀಡಲಾಗುವುದು. ಸಮ್ಮೇಳನವನ್ನು ಅತ್ಯಂತ ಅರ್ಥಪೂರ್ಣವಾಗಿ ಮತ್ತು ಆಕರ್ಷಕವಾಗಿ ಆಯೋಜಿಸಲಾಗುವುದು. […]

Read More

`ಚೆನ್ನಮ್ಮ ಕೇಸರಿ' ಪ್ರಶಸ್ತಿಯನ್ನು ನಾಲ್ಕು ಬಾರಿ ಗೆದ್ದ ಆಳ್ವಾಸ್‍ನ ಆತ್ಮಶ್ರೀ

ಮೂಡುಬಿದಿರೆ: ಜಮಖಂಡಿ ತಾಲೂಕಿನ ಕಂಬಾರಹಳ್ಳಿ ಗ್ರಾಮದಲ್ಲಿ ನಡೆದ ರಾಜ್ಯಮಟ್ಟದ ಕುಸ್ತಿ ಪಂದ್ಯಾಟದ ಮಹಿಳಾ ವಿಭಾಗದ 57 ಕೆ.ಜಿ ಅಧಿಕ ದೇಹತೂಕ ವಿಭಾಗದಲ್ಲಿ ಆಳ್ವಾಸ್‍ನ ಆತ್ಮಶ್ರೀ ವಿಜೇತರಾಗುವುದರೊಂದಿಗೆ ನಾಲ್ಕನೇ ಬಾರಿ `ಚೆನ್ನಮ್ಮ ಕೇಸರಿ’ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಆಳ್ವಾಸ್‍ನ ಸಾವಕ್ಕ 57 ಕೆ.ಜಿ ವಿಬಾಗದಲ್ಲಿ ಪ್ರಥಮ, ಲಕ್ಷ್ಮೀ ರೆಡೇಕರ್ 53 ಕೆ.ಜಿ ವಿಭಾಗದಲ್ಲಿ ಪ್ರಥಮ, ಅಪರ್ಣಾ ಸಿದ್ದಿ 48 ಕೆ.ಜಿ ವಿಭಾಗದಲ್ಲಿ ದ್ವಿತೀಯ, ಮಹಾಲಕ್ಷ್ಮೀ 57 ಕೆ.ಜಿ ವಿಭಾಗದಲ್ಲಿ ತೃತೀಯ, ಸಹನಾ ಪಿ.ಎಸ್ 57 ಕೆ.ಜಿ ಅಧಿಕ ದೇಹತೂಕ ವಿಭಾಗದಲ್ಲಿ […]

Read More

ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಗೆ ಆಳ್ವಾಸ್‍ನ 12 ಯೋಗಪಟುಗಳು ಆಯ್ಕೆ

ಮೂಡುಬಿದಿರೆ: ಮಲೇಶ್ಯಾದ ಕೊಲಲಾಂಪುರದಲ್ಲಿ 2018ರ ಜನವರಿ ಜ.28ರಿಂದ ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಗೆ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 12 ಮಂದಿ ಯೋಗಪಟುಗಳು ಆಯ್ಕೆಯಾಗಿದ್ದಾರೆ. ಅಖಿಲ್ ಪೂಜಾರಿ, ಪ್ರಶಾಂತ್, ತರುಣ್, ಮಿಲನ್ ಲೋಕೇಶ್ , ಪವನ್ ಈಶ್ವರ್, ವೀರಭದ್ರ, ನಿರ್ಮಲ, ಪೂಜಾ, ಸವಿತಾ, ಮಾಯಕ, ಚೈತ್ರಾ ಬೆಲವಿ, ಹರ್ಷಿನಿ ಆಯ್ಕೆಯಾದ ಆಳ್ವಾಸ್ ವಿದ್ಯಾರ್ಥಿಗಳು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

Read More

Highslide for Wordpress Plugin